loading

kannada jokes

Somaraju Ganganna
Raghava M V
ಪಕ್ಕದ ಮನೆಯಲ್ಲಿನ ಮೇಷ್ಟ್ರ ಮನೆಗೆ  ರಾಮು ಹೋಗಿ ಕೇಳಿದ;
"ಸಾರ್ ಸ್ವಲ್ಪ ಡಿ‍ಕ್ಷನರಿ ಇದ್ರೆ ಕೊಡ್ತೀರಾ"?
ಮೇಷ್ಟ್ರು:  "ಹೊರಗೆ ತೆಗೆದುಕೊಂಡು ಹೋಗಬಾರದು, ಇಲ್ಲಿಯೇ ಉಪಯೋಗಿಸಿ ಇಟ್ಟು ಹೋಗಬೇಕು".
ಮರುದಿನ ಮೇಷ್ಟ್ರು ರಾಮುವಿನ ಮನೆಗೆ ಬಂದರು.
 ರಾಮು: "ಬನ್ನಿ ಸಾರ್, ಕುಳಿತುಕೊಳ್ಳಿ..:
ಮೇಷ್ಟ್ರು:  "ಕುಳಿತುಕೊಳ್ಳಲು ಸಮಯವಿಲ್ಲ, ಸ್ವಲ್ಪ ಮನೆಯ ಧೂಳು ಒರೆಸುವ ಕಸಬರಿಕೆ  ಬೇಕು"ಅಂದರು.
ರಾಮು: "ಅಯ್ಯೋ ನಿಮಗೆ ಇಲ್ಲ ಅನ್ನೊದುಕ್ಕಾಗುತ್ತಾ, ಅದರೆ ಹೊರಗೆ ತೆಗೆದುಕೊಂಡು ಹೋಗಕೂಡದು, ಇಲ್ಲಿಯೇ ಉಪಯೋಗಿಸಿ ಇಟ್ಟು ಹೋಗಬೇಕು" ಎಂದ.
Raghava M V
ರಾಮು: ಅಪ್ಪಾ!
ತಂದೆ:  ಏನೋ ರಾಮು?.
ರಾಮು: ನನಗೆ ಪೀಟಿಲು ಅಂದರೆ ಬಹಳ  ಇಷ್ಟ.
ತಂದೆ : ನೀನು ಜಾಣಮರಿ, ನೀನು  ಮೊನ್ನೆ  ಚೌಡಯ್ಯನವರ ಪೀಟಿಲು ಕೇಲಿದೇನೋ?
ರಾಮು: ಕೇಳಿದೆನಪ್ಪಾ ಆದರೆ.....
ತಂದೆ ಅದರೆ ಏನೋ?
ರಾಮು: ಪೀಟಿಲು ಕೇಳಿದೆನಪ್ಪಾ, ಅದರೆ ಅವರು ಕೊಡುವುದಿಲ್ಲ ಅಂದುಬಿಟ್ರು..
Raghava M V
ರಾಮುವಿನ ಮನೆಯ ಬಾಗಿಲಲ್ಲಿ ಭಿಕ್ಷಕಿಯೊಬ್ಬಳು ಕೂಗುತ್ತಿದ್ದಳು,
ಕುಳಿತಲ್ಲಿಂದಲ್ಲೇ ರಾಮು ಮಗಳಿಗೆ ಕೂಗಿ ಹೇಳಿದ.
" ಒಂದೆರಡು ಕಾಳು ಭಿಕ್ಷೆ ಹಾಕಮ್ಮಾ ಅವಳಿಗೆ" ಎಂದ
 ಜೋಳ ಹಾಕಲೇನಪ್ಪಾ"
ಅಯ್ಯೋ ಹುಚ್ಚಿ, ನಮ್ಮಂತೆ ಜೋಳ ತಿನ್ನಲು ಅವರೇನು ದುಡಿಯುವವರೆ ಪಾಪ! ಅಕ್ಕಿಯನ್ನೇ ಹಾಕಮ್ಮಾ ಜೋಳ ತಿನ್ನಲು ಆವರಿಗೇನು ದರಿದ್ರ.?.
Raghava M V
ಆಕಸ್ಮಾತ್ ದೇವರು ಪ್ರತ್ಯಕ್ಷ್ಯನಾದರೆ ! ಯಾರು ಯಾರು ಏನು ವರ ಬೇಡುತ್ತಾರೆ ಎಂಬ ಕುತೂಹಲದ ಪ್ರಶ್ನೆಗೆಳಿಗೆ ಉತ್ತರ
ರಾಜಕಾರಣಿ: ದೇವರೆ! ನಾನು ಅಧಿಕಾರ ಹಿಡಿದರೆ ಐದು ವರ್ಷ ನಾನೇ  ಮಂತ್ರಿಯಾಗಿರೋ ಹಾಗೆ ಮಾಡಪ್ಪ.
ಪೋಲಿಸ್: ದೇವರೆ! ನನ್ನ ಹೆಂಡತಿ ನನ್ನ  ಜೇಬು ಚೆಕ್ ಮಾಡದೇ ಇರೋ ಹಾಗೆ ನೋಡಿಕೋಳಪ್ಪ..
ಎಂಜಿನಿಯರ್: ದೇವರೆ! ನಾನು ಕೆಲಸ ಮಾಡುವ ಕಂಪನಿ  ನಷ್ಟವಾಗದಮ್ತೆ ನೋಡಿಕೊಳ್ಳಪ್ಪ.
ಭಿಕ್ಷುಕ: ದೇವರೆ ! ನನಗೆ ಒಳ್ಳೆ  ಭಿಕ್ಷೆ ಸಿಗೋ ಹಾಗೆ ಮಾಡಪ್ಪ
ಸ್ವಾಮೀಜಿ: ದೇವರೆ! ಕೋಟ್ಯಾಧಿಶರಿಗೆ ದಾನ ಧರ್ಮ ಮಾಡೋ ಬುದ್ದಿ ಕೊಡಪ್ಪ.
 ದೇವರು:  ಅದಕ್ಕೆ ಕಣ್ಣ್ರೋ ಮುಟ್ಟಾಳರಾ,, ನಾನು ನಿಮ್ಮ  ಕೈಗೆ ಸಿಗದೆ ಓಡಿ ಹೋಗಿರೋದು..
Raghava M V
ನಗು ಗೆಳೆಯ ನಗು
ಹೊಟ್ಟೆಬಿರಿಯುವಷ್ಟು ನಗು
 ಕೇಕೆ ಹಾಕುತ್ತಾ ನಗು
ಅಟ್ಟಹಾಸಗೈ
ನನಗೇನಾಗಬೇಕು,
ಜನ ನಿನ್ನನೇ ಹುಚ್ಚ ಅಂದುಕೊಳ್ಳುತ್ತಾರೆ.